ಕುಷ್ಟಗಿ : ತಾವರಗೇರಾ 110 kv ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕಾರ್ಯ ನಿರ್ವಹಣೆ ನಿಮಿತ್ತ ಜೂ.26 ಬುಧವಾರ ಬೆಳಿಗ್ಗೆ 10 ರಿಂದ ಸಂಜೆ 6ರ ವರೆಗೂ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಈ ಕುರಿತು ಇಲ್ಲಿಯ ಜೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಾವರಗೇರಾ 110 kv ಹಾಗೂ 33 kV ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ತಾವರಗೇರಾ ಪಟ್ಟಣ, ಬಸವಣ್ಣ, ಕ್ಯಾಂಪ್, ಕಿಲಾರಹಟ್ಟಿ, ಕಿಲಾರಹಳ್ಳಿ ತಾಂಡಾ, ನವಳಹಳ್ಳಿ, ಗರ್ಜಿನಾಳ, ಕಳಮಳ್ಳಿ, ಉಮಳಿ ರಾಂಪುರ, ಕಿಡದೂರು, ನಾರಿನಾಳ, ಮೇಣದಾಳ, ಸಿದ್ದಾಪುರ, ಹಡಗಲಿ, ಹಿರೇಮೂಕರ್ತಿನಾಳ, ಚಿಕ್ಕಮೂಕರ್ತಿನಾಳ, ಪರಶುರಾಮ ಕೆರೆ, ಹುಲಿಯಾಪುರ, ಜುಮಲಾಪುರ ಸಾಸ್ಥಿಹಾಳ, ಇದ್ಲಾಪುರ, ಹಡಗಲಿ, ಜೆ ರಾಂಪುರ, ಜೆ ಅಡವಿಬಾವಿ, ನಂದಾಪುರ, ಬಚನಾಳ, ನವಲಹಳ್ಳಿ, ಗುಡ್ಡದ ಹನುಮಸಾಗರ, ಹಿರೇತೆಮ್ಮಿನಾಳ, ತೆಮ್ಮಿನಾಳ, ಗಂಗನಾಳ, ತಾಯಮ್ಮ ಕ್ಯಾಂಪ್ ಇತರ ಸುತ್ತಮುತ್ತಲಿನ ಗ್ರಾಮಗಳು ಹಾಗೂ ಕೃಷಿ ಪಂಪ್ ಸೆಟ್’ಗಳ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕು ಎಂದು ಕೋರಿದ್ದಾರೆ.
ಸೂಚನೆ : ತಾವರಗೇರಾ 110 kv ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕಾರ್ಯ ನಿರ್ವಹಣೆ ನಿಮಿತ್ತ ಕೈಗೊಂಡಿರುವ ಕಾರ್ಯ ಬೇಗನೆ ಮುಕ್ತಾಯಗೊಂಡರೆ ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಹಾಗಾಗಿ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ತಿ ಕಾರ್ಯ ಮಾಡಬಾರದು ಎಂದು ಕೋರಿರುವ ಜೆಸ್ಕಾಂ ಅಧಿಕಾರಿಗಳು, ಒಂದುವೇಳೆ ವಿದ್ಯುತ್ ಅಪಘಾತ ಸಂಭವಿಸಿದ್ದಲ್ಲಿ ಕಂಪನಿ ಜವಾಬ್ದಾರಿ ಆಗಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.