ಕೃಷಿಪ್ರಿಯ..
ಸುದ್ದಿ ಸಮರ್ಪಣ |
ಕೊಪ್ಪಳ : ಪಂಪ್ಸೆಟ್ ಮೋಟಾರ್ ಚಾಲು ಮಾಡಲು ಹೋಗಿ ವಿದ್ಯುತ್ ತಗುಲಿ ರೈತನೋರ್ವ ಸಾವನ್ನಪ್ಪಿದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಡೊಣ್ಣೆಗುಡ್ಡ ಗ್ರಾಮ ಸೀಮಾದ ಜಮೀನಿನಲ್ಲಿ ಮಂಗಳವಾರ ನಡೆದಿದೆ.
ಗ್ರಾಮದ ರೈತ ದುರುಗಪ್ಪ ನಿಂಗಪ್ಪ ಗ್ವಾಡಿ (45) ಸಾವಿಗೀಡಾದ ದುರ್ದೈವಿ ಎಂದು ಗುರುತಿಸಲಾಗಿದೆ. ತನ್ನ ಜಮೀನಿನಲ್ಲಿರುವ ಪಂಪ್ಸೆಟ್’ನ ಮೋಟಾರ್ ಚಾಲೂ ಮಾಡಲು ಹೋದಾಗ ಗಾಳಿಯಿಂದಾಗಿ ಮೈಮೇಲೆ ಸ್ಟಾಟರ್ ಡಬ್ಬಿ ಬಿದ್ದು ವಿದ್ಯುತ್ ತಗುಲಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ. ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಮೃತದೇಹವನ್ನು ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಗೆ ತರಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.