ಕೃಷಿಪ್ರಿಯ..
ಸುದ್ದಿ ಸಮರ್ಪಣ |
ಕುಷ್ಟಗಿ : ಅಖಿಲ ಭಾರತ ವೀರಶೈವ ಮಹಾಸಭಾ ಕುಷ್ಟಗಿ ತಾಲೂಕು ಘಟಕ ರಚನೆಗೆ ಅಧ್ಯಕ್ಷ ಸೇರಿದಂತೆ 21 ಸದಸ್ಯರ ಆಯ್ಕೆಗೆ ಜೂ.26ರಿಂದ ಚುನಾವಣೆ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಈ ಕುರಿತು ಸಹಾಯಕ ಚುನಾವಣಾಧಿಕಾರಿ ವೀರಬಸಪ್ಪ ಕಲಾಲಬಂಡಿ ಅವರು ಸ್ಥಳೀಯ ಸುದ್ದಿಗಾರರಿಗೆ ಮಾಹಿತಿ ನೀಡಿ, ತಾಲೂಕು ಘಟಕದ ಅಧ್ಯಕ್ಷ ಸ್ಥಾನ, 7 ಜನ ಮಹಿಳಾ ಸದಸ್ಯರು ಹಾಗೂ 13 ಜನ ಪುರಷ ಸದಸ್ಯರ ಆಯ್ಕೆಗೆ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವರಿಗೆ ಒಬ್ಬರು ಸೂಚಕ ಹಾಗೂ 10 ಜನ ಅನುಮೋದಕರ ಅಗತ್ಯವಿದೆ. ಅದೇರೀತಿ ಸದಸ್ಯರ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವವರಿಗೆ ಒಬ್ಬರು ಸೂಚಕ ಹಾಗೂ ಐವರು ಅನುಮೋದಕರು ಬೇಕಾಗುತ್ತದೆ ಎಂದರು.
ಕುಷ್ಟಗಿ ತಾಲೂಕಿನಿಂದ ವೀರಶೈವ ಅಖಿಲ ಭಾರತ ಮಹಾಸಭಾಕ್ಕೆ 629 ಜನ ಸದಸ್ಯರು ನೋಂದಣಿ ಮಾಡಿಸಿದ್ದಾರೆ. 300ಕ್ಕೂ ಹೆಚ್ಚು ಸದಸ್ಯ ಬಲ ಹೊಂದಿದಲ್ಲಿ ಮಾತ್ರ ಚುನಾವಣೆ ಮೂಲಕ ಘಟಕ ರಚನೆಗೆ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸದಸ್ಯ, ಅಧ್ಯಕ್ಷ ಸೇರಿದಂತೆ 21 ಸದಸ್ಯರನ್ನು ಚುನಾಯಿಸಲು ಮತ ಚಲಾಯಿಸಬೇಕಾಗುತ್ತದೆ ಎಂದರು.
ಪಟ್ಟಣದ ಕೊಪ್ಪಳ ರಸ್ತೆ ಪಕ್ಕದ ಶ್ರೀಧರ್ಮಸ್ಥಳ ಮಂಜುನಾಥ ಯೋಜನಾ ಕಚೇರಿ ಹಿಂಭಾಗದ ಕಟ್ಟಡದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಜೂನ್ 26ರಂದು ಬೆಳಿಗ್ಗೆ 10.30ರಿಂದ ಜುಲೈ04 ಮಧ್ಯಾಹ್ನ 3ರ ವರೆಗೆ ನಾಮಪತ್ರ ಸ್ವೀಕರಿಸಲಾಗುತ್ತದೆ. ಜು.5 ಬೆಳಿಗ್ಗೆ 10.30ರಿಂದ ನಾಮಪತ್ರ ಪರಿಶೀಲನೆ ನಡೆಯಲಿದೆ. ಜುಲೈ 8 ಮಧ್ಯಾಹ್ನ 3ರ ವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಜುಲೈ 21 ಭಾನುವಾರ ಬೆಳಿಗ್ಗೆ 8ರಿಂದ ಸಂಜೆ 5ಗಂಟೆ ಮಯವರೆಗೆ ಮತದಾನ ನಡೆಯಲಿದೆ. ಬಳಿಕ ಮತ ಎಣಿಕೆ ನಡೆಯಲಿದೆ. ಚುನಾವಣಾಧಿಕಾರಿ ನಿವೃತ್ತ ಐಎಎಸ್ ಅಧಿಕಾರಿ ಎಂ.ಬಿ.ದ್ಯಾಬೇರಿ ಸೂಚನೆ ಬಳಿಕ ಫಲಿತಾಂಶ ಘೋಷಣೆ ಮಾಡ ಮಾಡಲಾಗುತ್ತದೆ.ಚುನಾವಣೆ ಪ್ರಕ್ರಿಯೆಯಲ್ಲಿ ಶರಣಪ್ಪ ಬಿಸನಳ್ಳಿ, ಕಳಕಪ್ಪ ರಡ್ಡೇರ್ ಹಾಗೂ ಬಸವರಾಜ ಅವರು ಸಹಾಯಕ ಚುನಾವಣಾ ಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಚುನಾವಣೆ ಕುರಿತು ಹೆಚ್ಚಿನ ಮಾಹಿತಿಗೆ ತಮ್ಮನ್ನು( ಮೊ. ಸಂ. 9611092959) ಎಂದು ಸಹಾಯಕ ಚುನಾವಣಾಧಿಕಾರಿ ವೀರಬಸಪ್ಪ ಕಲಾಲಬಂಡಿ ಅವರು ತಿಳಿಸಿದರು.