ಕುಷ್ಟಗಿ | ಸಯ್ಯದ ಮಹಮ್ಮದ ಗೌಸ್’ಸಾಬ ಮುಲ್ಲಾ ಇನ್ನಿಲ್ಲ

ಕೃಷಿಪ್ರಿಯ..
ಸುದ್ದಿ ಸಮರ್ಪಣ |

ಕುಷ್ಟಗಿ : ಪಟ್ಟಣದ ಮದೀನಾ ಗಲ್ಲಿ ವಠಾರ ಓಣಿಯ ನಿವಾಸಿ ಹಣ್ಣಿನ ವ್ಯಾಪಾರಿ ಸಯ್ಯದ ಮಹಮ್ಮದ ಗೌಸ್’ಸಾಬ್ ಮುಲ್ಲಾ(ಜ್ಯೂ.ಅಮಿತಾಬ ಬಚ್ಚನ್)(60) ಭಾನುವಾರ ನಿಧನರಾದರು.

ಮೃತರು ಪತ್ನಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ರಸ್ತೆ ಬದಿ ತಳ್ಳೋ ಬಂಡಿಯಲ್ಲಿ ಹಣ್ಣಿನ ವ್ಯಾಪಾರ ಮಾಡಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದ ಸಯ್ಯದ ಮಹಮ್ಮದ ಗೌಸ್’ಸಾಬ್ ಮುಲ್ಲಾ ಅವರು ಹೋಲಿಕೆಯಲ್ಲಿ ಹಿಂದಿ ಚಿತ್ರರಂಗದ ಬಾಲಿವುಡ್ ಬಾದಷಾ ಹಿರಿಯ ನಟ ಅಮಿತಾಬ್ ಬಚ್ಚನ್ ಅವರಂತೆ ಕಾಣುತಿದ್ದ ಹಿನ್ನೆಲೆ ಪಟ್ಟಣದ ಜನತೆ ಅವರನ್ನು ಪ್ರೀತಿಯಿಂದ ಜ್ಯೂನಿಯರ್ ಅಮಿತಾಬ್ ಬಚ್ಚನ್ ಎಂದು ಕರೆಯುತಿದ್ದರು.
ಸೋಮವಾರ ಬೆಳಗ್ಗೆ 10 ಗಂಟೆಗೆ ಗಜೇಂದ್ರಗಡ ರಸ್ತೆ ಬಳಿಯ ಈದ್ಗಾ ಪಕ್ಕದ ಖಬರಸ್ತಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತ ಸಯ್ಯದ ಮಹಮ್ಮದ ಗೌಸ್’ಸಾಬ್ ಮುಲ್ಲಾ (ಜ್ಯೂ.ಅಮಿತಾಬ ಬಚ್ಚನ್’ಗೆ) ಪಟ್ಟಣದ ಜನತೆ ಕಂಬನಿ ಮಿಡಿದಿದ್ದಾರೆ.