“ಕೃಷಿಪ್ರಿಯ” ಆನ್ಲೈನ್ ಪತ್ರಿಕೆ ಸಂಸ್ಥಾಪಕ, ಸಂಪಾದಕ ಸರಳ ಸಜ್ಜನಿಕೆಯ ಅಂತಃಕರಣದ ವ್ಯಕ್ತಿ, ಕ್ರಿಯಾಶೀಲ ಬರಹಗಾರ, ಸದಾ ಹಸನ್ಮುಖಿಯ ಪತ್ರಕರ್ತ ಶರಣಪ್ಪ ಕುಂಬಾರ ನಮ್ಮನ್ನಗಲಿ ಇಂದಿಗೆ ಒಂದು ವರ್ಷ.!
ಜುಲೈ 05- 2023 ಕೃಷಿಪ್ರಿಯ ಪತ್ರಿಕಾ ಬಳಗಕ್ಕೆ ಕರಾಳದಿನ. ಕೊಪ್ಪಳ ಜಿಲ್ಲೆ ಸೇರಿದಂತೆ ನಾಡಿನ ಅನೇಕ ಪತ್ರಕರ್ತರು ಉಹಿಸಿರದ ಸಾವಿನ ಸುದ್ದಿಯೊಂದು ಬರಸಿಡಿಲಂತೆ ಬಡಿದಂತೆ ಎಂದರೆ ತಪ್ಪಾಗಲಿಕ್ಕಿಲ್ಲ.
ವಿಭಿನ್ನ ಬರಹ ಶೈಲಿಯಲ್ಲಿ ಕೃಷಿ, ಕ್ರೀಡೆ, ರಾಜಕೀಯ ವಿಷ್ಲೇಷಣೆ, ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ವಿಷಯಗಳ ಕುರಿತು ಬರಹಗಳನ್ನು ನೀಡುವ ಮೂಲಕ ಅಪಾರ ಸಂಖ್ಯೆಯ ಓದುಗರ ಪ್ರೀತಿ ಗೌರವ ಗಳಿಸಿದ್ದ ಪತ್ರಕರ್ತ ಶರಣಪ್ಪ ಕುಂಬಾರ ಅವರು ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡವರು. ಮಾಧ್ಯಮ ಕ್ಷೇತ್ರ ಅಲ್ಲದೆ ಇತರೆ ಕ್ಷೇತ್ರಗಳಲ್ಲಿಯೂ ಆಸಕ್ತಿ ಬಯಸಿ ಬರುವ ಅನೇಕ ಯುವಕರಿಗೆ ಬೆನ್ನುತಟ್ಟಿ ಮಾರ್ಗದರ್ಶನ ನೀಡಿದ್ದಾರೆ.
ಅವರು ನಮ್ಮನ್ನಗಲಿ ಇಂದಿಗೆ ಒಂದು ವರ್ಷ ಪೂರೈಸಿದೆ. ದೈಹಿಕವಾಗಿ ನಮ್ಮ ಮುಂದೆ ಇಲ್ಲದಿದ್ದರೂ ಅವರ ವ್ಯಕ್ತಿತ್ವ, ವಿಚಾರಗಳು, ಕಾರ್ಯಗಳ ಮೂಲಕ ಸದಾ ನಮ್ಮೊಂದಿಗೆ ಇಂದು, ಮುಂಬರುವ ದಿನಗಳಲ್ಲಿ ಸದಾ ಇರುತ್ತಾರೆ. ಸದಾ ನಮ್ಮ ಏಳಿಗೆ ಬಯಸಿದ ದಿ.ಶರಣಪ್ಪ ಕುಂಬಾರ ಚಿರಚೇತನಕ್ಕೆ ನಮನಗಳು.
– ಸಂಗಮೇಶ ಮುಶಿಗೇರಿ
– ಶರಣು ಲಿಂಗನಬಂಡಿ