ಕುಷ್ಟಗಿ | ಯಾದಗಿರಿ-ರಾಯಚೂರಿಗೆ AIIMS ಘೋಷಿಸಲು ಕೇಂದ್ರ ಸರ್ಕಾರಕ್ಕೆ ಕರವೇ ಒತ್ತಾಯ

ಸುದ್ದಿ ಸಮರ್ಪಣ |

ಕುಷ್ಟಗಿ : ಕಲ್ಯಾಣ ಕರ್ನಾಟಕದ ಯಾದಗಿರಿ- ರಾಯಚೂರು ಜಿಲ್ಲೆಗೆ ಭಾರತೀಯ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ (AIIMS) ಘೋಷಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಎಚ್. ಶಿವರಾಮೇಗೌಡರ ಬಣದ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಹಾಗೂ ಜಿಲ್ಲಾ ಘಟಕಗಳ ಕಾರ್ಯಾಕರ್ತರು ಒತ್ತಾಯಿಸಿದ್ದಾರೆ.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಶನಿವಾರ ಸಮಾವೇಶಗೊಂಡ ಕಾರ್ಯಕರ್ತರು ಹಾಗೂ ರೈತಪರ ಸಂಘಟನೆ ಪ್ರಮುಖರು ರಾಯಚೂರಿಗೆ ಮಾಡುವುದಾದ ಏಮ್ಸ್’ ಧಾರವಾಡಗೆ ವರ್ಗಮಾಡುವುದನ್ನು ವಿರೋಧಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಕರವೇ ಪ್ರಮುಖರು ಮಾತನಾಡಿ, ಕಳೆದ ಸರ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ 112 ಜಿಲ್ಲೆಗಳಲ್ಲಿ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಘೋಷಣೆ ಮಾಡಿದ್ದಾರೆ. ಅದರಲ್ಲಿ ಕಲ್ಯಾಣ ಕರ್ನಾಟಕದ ಯಾದಗಿರಿ-ರಾಯಚೂರು ಜಿಲ್ಲೆಗಳು ಒಳಗೊಂಡಿವೆ. ಸ್ವಾತಂತ್ರ್ಯ ನಂತರ ಈವರೆಗೂ ಯಾವುದೇ ಯೋಜನೆಗಳು ಜಾರಿಯಾಗಿಲ್ಲ. ತೀರಾ ಹಿಂದುಳಿದ ಈ ಜಿಲ್ಲೆಗಳು ಶಿಕ್ಷಣ ಕೊರತೆಯಿಂದ, ರೋಗ ರುಜಿನಗಳಿಂದ ಗುರುತಿಸಿಕೊಂಡಿವೆ. ರಾಜ್ಯ ಸರ್ಕಾರ ಪ್ರಾದೇಶಿಕ ಅಸಮತೋಲನೆಯನ್ನು ಹೋಗಲಾಡಿಸಲು ನಂಜುಂಡಪ್ಪ ವರದಿಯಂತೆ ಆಯಾ ಜೆಲ್ಲೆಗಳ ಬೇಡಿಕೆಗನುಸಾರ ರಾಯಚೂರು ಜಿಲ್ಲೆಗೆ ಐಐಟಿ ಒದಗಿಸಲು ತಿಳಿಸಲಾಗಿತ್ತು. ಐಐಟಿಗಾಗಿ ಹಲವು ಸಂಘ ಸಂಸ್ಥೆಗಳು ಕೂಡಾ ಗಂಭೀರ ಹೋರಾಟ ಮಾಡಿದವು. ಆದರೆ, ರಾಯಚೂರಿಗೆ ಮಂಜೂರಾಗಬೇಕಾದ ಐಐಟಿಯನ್ನು ರಾಜಕೀಯ ಪ್ರಬಲದಿಂದ ಧಾರವಾಡ ಜಿಲ್ಲೆಗೆ ಮೋಸದಿಂದ ಕಸಿದುಕೊಳ್ಳಲಾಯಿತು. ಆಗ ಈ ಭಾಗದವರನ್ನು ಸಮಾಧಾನ ಪಡಿಸಲು ಆಗಿನ ರಾಜ್ಯ ಸರ್ಕಾರ ರಾಯಚೂರಿನಲ್ಲಿ AIIMS ಮಂಜೂರಿಗೆ ಭರವಸೆ ನೀಡಿತ್ತು. ರಾಜ್ಯಕ್ಕೆ ಒಂದು AIIMS ಮಂಜೂರಿಗೆ ಆಗಿನ ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಪುನಃ ಪ್ರಬಲ ರಾಜಕಾರಣಿಗಳ ಕುತಂತ್ರದಿಂದ AIIMS ಅನ್ನು ಧಾರವಾಡಕ್ಕೆ ತೆಗೆದುಕೊಂಡು ಹೋಗಲು ಹುನ್ನಾರ ನಡೆಸಿದೆ. ನ್ಯಾಯಯುತವಾಗಿ ಬರಬೇಕಾದ AIIMSಗಾಗಿ ಹಲವು ಸಂಘ-ಸಂಸ್ಥೆಗಳು ನಿರಂತರ ಅನಿರ್ಧಿಷ್ಟ ಧರಣೀ ಹೋರಾಟ ಮುಂದುವರೆದಿದೆ ಎಂದರು.
ರಾಜ್ಯ ಸರ್ಕಾರದ ನಿಯೋಗ ಕೂಡಾ ಕೇಂದ್ರ ಆರೋಗ್ಯ ಕುಟುಂಬ ಕಲ್ಯಾಣ ಮಂತ್ರಿ ಮಸ್ಸುಕ್ ಮಾಂಡವಿಯಾ ಅವರನ್ನು ಭೇಟಿ ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರು ಆರೋಗ್ಯ ಸಚಿವರಿಗೆ ಮತ್ತು ವಿತ್ತ ಸಚಿವರಿಗೆ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರದ ಒತ್ತಡವಿದ್ದರೂ ಸಹ ಕೇಂದ್ರ ಉತ್ತರಿಸುತ್ತಿಲ್ಲವೇಕೆ ಎಂದು ಪ್ರಶ್ನಿಸಿದ ಕರವೇ ಕಾರ್ಯಕರ್ತರು.? ಈ ಭಾಗದ ಜನರ ಬೇಡಿಕೆಗೆ ಪ್ರಾಧಾನಮಂತ್ರಿಗಳು ಗಮನ ಹರಿಸಿ ರಾಯಚೂರು ಜಿಲ್ಲಾ ಕೇಂದ್ರಕ್ಕೆ ಭಾರತೀಯ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ (AIIMS) ಘೋಷಣೆ ಮಾಡಬೇಕು. ಇಲ್ಲದಿದ್ದರೆ ಕಲ್ಯಾಣ ಕರ್ನಾಟಕದಲ್ಲಿ ಭಯಂಕರ ಚೆಳುವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಕುರಿತು ಪ್ರಾಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಮನವಿ ಪತ್ರವನ್ನು ಗ್ರೇಡ್-2 ತಹಸೀಲ್ದಾರ್ ಮುರಲೀಧರ ಮುಕ್ತೇದಾರ ಮುಖಾಂತರ ಸಲ್ಲಿಸಿದರು. ಈ ವೇಳೆ ಕರವೇ ತಾಲೂಕಾಧ್ಯಕ್ಷ ಮಾರುತಿ ಹಲಗಿ, ಉಪಾಧ್ಯಕ್ಷ ಈರಪ್ಪ ಬಳಿಗೇರ, ಮಲ್ಲಿಕಾರ್ಜುನ ಗುಗ್ಗರಿ, ಅಜ್ಜಪ್ಪ ಕರಡಕಲ್, ಸಂಗಪ್ಪ ಕುಂಬಾರ ಯಮನಪ್ಪ ದೊಡ್ಡಮನಿ, ಮಂಜುನಾಥ ದೋಟಿಹಾಳ, ಯಮನೂರ ಲಿಂಗದಹಳ್ಳಿ, ರೈತ ಸಂಘದ ಪ್ರಮುಖ ನಜೀರಸಾಬ ಮೂಲಿಮನಿ, ಪುರಸಭೆ ಸದಸ್ಯ ಮೆಹಬೂಬ ಕಮ್ಮಾರ, ರಾಘವೇಂದ್ರ ಭಜೇಂತ್ರಿ ಇತರರಿದ್ದರು.