ಸುದ್ದಿ ಸಮರ್ಪಣ |
ಕುಷ್ಟಗಿ : ಪಟ್ಟಣದಲ್ಲಿ ಡೆಂಗ್ಯೂ ಜ್ವರದ ಆತಂಕ ಹೆಚ್ಚಾಗಿದ್ದು, ಡೆಂಗ್ಯೂ ಹರಡದಂತೆ ತಡೆಗಟ್ಟಲು ವಾರ್ಡಗಳ ಸ್ವಚ್ಛತೆಗೆ ಮುಂದಾಗಬೇಕು ಎಂದು ಪ್ರಜ್ಞಾವಂತ ನಾಗರಿಕ ಬಳಗ ಪುರಸಭೆ ಅಧಿಕಾರಿಗಳಿಗೆ ಬುಧವಾರ ಮನವಿ ಮಾಡಿದೆ.
ಪುರಸಭೆ ವ್ಯಾಪ್ತಿಯ 23 ವಾರ್ಡಗಳಲ್ಲಿ ಡೆಂಗ್ಯೂ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುವ ಆತಂಕ ಹೆಚ್ಚಾಗಿದೆ. ಚಿಕ್ಕ ಮಕ್ಕಳಿಂದ ದೊಡ್ಠವರು ಜ್ವರದ ಬಾದೆಯಿಂದ ಬಳಲುತಿದ್ದು, ಆಸ್ಪತ್ರೆಗಳಿಗೆ ಎಡತಾಕುತಿದ್ದಾರೆ. ಹಾಗಾಗಿ ಪ್ರತಿ ವಾರ್ಡಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಔಷಧ ಸಿಂಪರಣೆ ಮಾಡಬೇಕು. ಹಾಗೂ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು ಎಂದು ಪುರಸಭೆ ಅಧಿಕಾರಿಗಳಿಗೆ ಪ್ರಜ್ಞಾವಂತ ನಾಗರಿಕ ಬಳಗದ ಸಿದ್ದಯ್ಯ ಗುರುವಿನ, ಹನುಮೇಶ ಜೋಷಿ, ತೊಂಡೆಪ್ಪ ಚೂರಿ, ರಾಜಪ್ಪ ಸಂಗಟಿ, ವಿಠ್ಠಲಸಿಂಗ ರಜಪೂತ, ಬಾಬು ಹೂಗಾರ, ಮುತ್ತಣ್ಣ ಗೊರೆಬಾಳ ಇತರರು ಲಿಖಿತವಾಗಿ ಮನವಿ ಮಾಡಿದ್ದಾರೆ.