ಸಂಗಮೇಶ ಮುಶಿಗೇರಿ
ಸುದ್ದಿ ಸಮರ್ಪಣ |
ಕುಷ್ಟಗಿ : ತಾಲೂಕಿನ ಕಡೇಕೊಪ್ಪ ಗ್ರಾಮದ ಬಳಿಯ ರಾಷ್ಟ್ರೀಯ ಚತುಷ್ಪಥ ಹೆದ್ದಾರಿ ಬ್ರಿಜ್ ಮೆಲೆ ಭೀಕರವಾಗಿ ಬೈಕ್ ಅಪಘಾತ ಸಂಭವಿಸಿ ಮಹಿಳೆ ಮತ್ತು ಹುಡುಗ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಭಾನುವಾರ ಮದ್ಯಾಹ್ನ ವೇಳೆ ನಡೆದಿದೆ.
ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಷ್ಟಗಿ-ಇಳಕಲ್ ಮಾರ್ಗದ ರಾಷ್ಟ್ರೀಯ ಚತುಷ್ಪಥ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತರು ಕಡೇಕೊಪ್ಪ ತಾಂಡದ ನಿವಾಸಿ ರುಕ್ಮಿಣಿ ಗಂ. ರಂಜಿತ್ ಸಿಂಗ್ ಸುಮಾರು (42) ಮತ್ತು ಹುಡುಗ ವಿಜಯ (12) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ.
ಇಳಕಲ್ ಕಡೆಗೆ ಬೈಕ್ ಮೂಲಕ ಸವಾರಿ ಮಾಡಿಕೊಂಡು ಹೋಗುತಿದ್ದ ಸಂದರ್ಭದಲ್ಲಿ ಯಾವುದೋ ವಾಹನ ತಾಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್’ಐ ಮುದ್ದುರಂಗಸ್ವಾಮಿ ಹಾಗೂ ಹೈವೆ ಪೆಟ್ರೋಲಿಯಂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.