ಕುಷ್ಟಗಿ | ಏಷ್ಯನ್ ಗೇಮ್ಸ್ ಅಲ್ಲಿ ಭಾಗವಹಿಸಲು ಜಪಾನಗೆ ತೆರಳುತ್ತಿರುವ ಮಂಜುನಾಥಗೆ ಸನ್ಮಾನ

ಸಂಗಮೇಶ ಮುಶಿಗೇರಿ
ಸುದ್ದಿ ಸಮರ್ಪಣ |

ಕುಷ್ಟಗಿ : ಜಪಾನ ದೇಶದ ಕವಾಸಕಿಯಲ್ಲಿ ಜು. 22 ರಿಂದ 30ರ ವರೆಗೆ ನಡೆಯಲಿರುವ ಏಷ್ಯನ್ ಜಂಪ್ ರೋಪ ಗೇಮ್ಸ್’ಲ್ಲಿ ಆಲ್ ಓವರ್ ಇಂಡಿಯಾ ಯುನಿವರ್ಸಿಟಿಯಿಂದ ಜಂಪ್ ರೋಪ್ ಸ್ಕಿಪಿಂಗ್’ಲ್ಲಿ ಭಾಗವಹಿಸಲು ತೆರಳುತ್ತಿರುವ ಪಟ್ಟಣದ ಪ್ರತಿಭೆ ಮಂಜುನಾಥ ಕನಕಪ್ಪ ಚೌಡಕಿಯನ್ನು ಗುರುವಾರ ಸನ್ಮಾನಿಸಲಾಯಿತು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಮಂಜುನಾಥ ಚೌಡಕಿಯ ಪ್ರತಿಭೆಯನ್ನು ಮೆಚ್ಚಿ ಇಲ್ಲಿಯ ತಾಲೂಕು ಕ್ರೀಡಾಂಗಣದಲ್ಲಿ ಕಾಲೇಜು ಪ್ರಾಚಾರ್ಯ ಡಾ.ಎಸ್.ವಿ. ಡಾಣಿ ಅವರು ಹಾಗೂ ಉಪನ್ಯಾಸಕ ವೃಂದ ಶಾಲು ಹೊದಿಸಿ ಹೂಮಾಲೆ ಹಾಕಿ ಗೌರವಿಸಿದರು.

ಜಂಪ್ ರೋಪ್, ರೋಪ ಸ್ಕಿಪ್ಪಿಂಗ್ ಸೇರಿದಂತೆ ರೋಪ ಸ್ಕಿಪ್ಪಿಂಗ್ ಅಲ್ಲಿ 20 ರಿಂದ 30 ಬಗೆಯ ಆಟಗಳನ್ನು ಪ್ರದರ್ಶಿಸುವ ಮಂಜುನಾಥ್ ಚೌಡಕಿ, ಈಗಾಗಲೇ ವಿಭಾಗಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ಉತ್ತಮ ಆಟಗಳನ್ನು ನೀಡಿ ಪದಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಹನುಮಸಾಗರದ ಕ್ರೀಡಾ ತರಬೇತುದಾರ ಅಬ್ದುಲ್ ರಜಾಕ್ ಅವರಿಂದ ತರಬೇತಿ ಪಡೆಯುತ್ತಿದ್ದು, ಜಪಾನ ದೇಶದಲ್ಲಿ ನಡೆಯಲಿರುವ ಎಶಿಯನ್ ಜಂಪ್ ರೋಪ ಗೇಮ್ಸ್’ಲ್ಲಿ ಭಾಗವಹಿಸಿ ವಿಜಯಿಶಾಲಿಯಾಗಲಿ ದೇಶಕ್ಕೆ, ರಾಜ್ಯಕ್ಕೆ, ಜಿಲ್ಲೆಗೆ ಕುಷ್ಟಗಿ ಹೆಸರು ತರಲಿ ಎಂದು ಪ್ರಾಚಾರ್ಯ ಡಾ.ಎಸ್.ವಿ. ಡಾಣಿ ಹಾಗೂ ಉಪನ್ಯಾಸಕ ವೃಂದ ಹಾರೈಸಿದರು.