ಹಿರೇಅರಳಹಳ್ಳಿ | ವಿರುಪಾಕ್ಷಪ್ಪ ಹಡಪದ ಇನ್ನಿಲ್ಲ

ಸುದ್ದಿ ಸಮರ್ಪಣ |

ಯಲಬುರ್ಗಾ : ತಾಲೂಕಿನ ಹಿರೇಅರಳಹಳ್ಳಿ ಗ್ರಾಮದ ನಿವಾಸಿ ಹಡಪದ ಸಮುದಾಯದ ಹಿರಿಯಜೀವಿ ವಿರುಪಾಕ್ಷಪ್ಪ ತಂದೆ ಬಸಪ್ಪ ಹಡಪದ (75) ಭಾನುವಾರ ಸ್ವಗೃಹದಲ್ಲಿ ನಿಧನರಾದರು.

ಮೃತರು ಒರ್ವ ಪುತ್ರ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ. ಸೋಮವಾರ ಮದ್ಯಾಹ್ನ ಗ್ರಾಮದ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತ ವಿರುಪಾಕ್ಷಪ್ಪ ಅವರಿಗೆ ಗ್ರಾಮಸ್ಥರು ಹಾಗೂ ಹಡಪದ ಸಮಾಜದ ಬಾಂಧವರು ಕಂಬನಿ ಮಿಡಿದಿದ್ದಾರೆ.