ಕುಷ್ಟಗಿ | ಪಟ್ಟಣ ಸೇರಿ ವಿವಿಧೆಡೆ ಜು.27 ರಂದು ವಿದ್ಯುತ್ ವ್ಯತ್ಯಯ

ಸಂಗಮೇಶ ಮುಶಿಗೇರಿ

ಸುದ್ದಿ ಸಮರ್ಪಣ |

ಕುಷ್ಟಗಿ : ಪಟ್ಟಣದ 220 kv ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ಕಾರ್ಯ ನಿರ್ವಹಣೆ ನಿಮಿತ್ಯ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಪ್ರದೇಶದಲ್ಲಿ ಜುಲೈ 27 ರಂದು ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 05 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಈ ಕುರಿತು ಇಲ್ಲಿಯ ಜೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪಟ್ಟಣದ 220 kv ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ವಿದ್ಯುತ್ ಸರಬರಾಜುಗೊಳ್ಳುವ ಪ್ರದೇಶಗಳಾದ ಕುಷ್ಟಗಿ ಪಟ್ಟಣ, ಕುಷ್ಟಗಿ N H, ನಿಡಶೇಶಿ, ಮದಲಗಟ್ಟಿ, ಬ್ಯಾಲಿಹಾಳ, ಬೆಂಚಮಟ್ಟಿ, ಕೊರಡಕೇರಾ, ಹಿರೇನಂದಿಹಾಳ, ಹಿರೇಬನ್ನಿಗೋಳ, ಕನಕೊಪ್ಪ, ಬಿಸನಾಳ, ದೊಣ್ಣೆಗುಡ್ಡ, ಚಿಕ್ಕನಂದಿಹಾಳ, ಯಲಬುರ್ತಿ, ಶಾಖಾಪುರ, ನೆರೆಬೆಂಚಿ, ಕುರುಬನಾಳ, ಹಿರೇಮನ್ನಪುರ, ಕಂದಕೂರು, ಗುಮಗೆರಾ, ನಾಗರಾಳ, ಗಂಗನಾಳ, ಹಂಚಿನಾಳ ಇತರ ಸುತ್ತಮುತ್ತಲಿನ ಗ್ರಾಮಗಳು ಹಾಗೂ ಕೃಷಿ ಪಂಪ್ ಸೆಟ್ ಗಳು ಹೊಂದಿರುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದ್ದಾರೆ.


ಸೂಚನೆ : ತ್ರೈಮಾಸಿಕ ಕಾರ್ಯನಿರ್ವಹಣೆ ನಿಮಿತ್ತ ಕೈಗೊಂಡಿರುವ ಕಾರ್ಯ ಬೇಗನೆ ಮುಕ್ತಾಯಗೊಂಡರೆ ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಹಾಗಾಗಿ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ತಿ ಕಾರ್ಯ ಮಾಡಬಾರದು ಎಂದು ಕೋರಿರುವ ಜೆಸ್ಕಾಂ ಅಧಿಕಾರಿಗಳು, ಒಂದುವೇಳೆ ವಿದ್ಯುತ್ ಅಪಘಾತ ಸಂಭವಿಸಿದ್ದಲ್ಲಿ ಕಂಪನಿ ಜವಾಬ್ದಾರಿ ಆಗಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.