ಸುದ್ದಿ ಸಮರ್ಪಣ |
ಕುಷ್ಟಗಿ : ತಾಲೂಕಿನ ನಿಡಶೇಸಿ ಗ್ರಾಮದ ನಿವಾಸಿ ಶಿಕ್ಷಕ ಶರಣಪ್ಪ ಬಳಿಗಾರ (55) ಶನಿವಾರ ರಾತ್ರಿ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ. ಭಾನುವಾರ ಮದ್ಯಾಹ್ನ ಗ್ರಾಮದ ಹೊರವಲಯದ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಮೃತರ ಸಂಬಂಧಿಕರು ತಿಳಿಸಿದ್ದಾರೆ. ಶರಣಪ್ಪ ಬಳಿಗಾರ ಅವರ ಸಾವಿಗೆ ಗ್ರಾಮಸ್ಥರು ಸೇರಿದಂತೆ ಶಿಕ್ಷಕ ವಲಯ ಕಂಬನಿ ಮಿಡಿದಿದ್ದಾರೆ.
ಸಂತಾಪ : ತಾಲೂಕಿನ ಜೂಲಕಟ್ಟಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆಯಲ್ಲಿದ್ದ ಶರಣಪ್ಪ ಬಳಿಗಾರ ಅವರು ನಿಡಶೇಸಿ ಶ್ರೀಮಠದ ಪರಮ ಭಕ್ತರಾಗಿದ್ದರು. ಶ್ರೀಮಠದಿಂದ ಜಾತ್ರಾ ಮಹೋತ್ಸವ ಸಮಿತಿಯ ಸದಸ್ಯರೂ ಆಗಿದ್ದ ಅವರು ಕಳೆದ ಹದಿನೈದು ವರ್ಷಗಳಿಂದ ಜಾತ್ರೆಯ ಆಯವ್ಯಯವನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದರು ಎಂದು ಶ್ರೀಮಠದ ಅಭಿನವ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ.